ಸಹೃದಯರ ಪುಟ ವೀಕ್ಷಣೆಗಳು

ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ

ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ  

>> ಹೆಚ್ಚಿನ ಮಾದರಿ ಪ್ರಶ್ನೆಪತ್ರಿಕೆಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ << 

<< Computer Fundamentals >> 

<< MS Word >>

<< MS Excel >> 

<< MS Power Point >>

<< Computer Net working >> 

<< MS DOS >>

*ಸರ್ಕಾರಿ ನೌಕರರಿಗೆ ಕಡ್ಡಾಯ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ*

>  ಕರ್ನಾಟಕ ಸರ್ಕಾರಿ ಪ್ರೌಢ ಶಾಲಾ ಸಹಶಿಕ್ಷಕರ ಬಳಗದಲ್ಲಿ ಶ್ರೀ ಶ್ರೀನಿವಾಸ ಬೆಲಾಳ್ ರವರು ಪ್ರಕಟಿಸಿರುವುದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ.

*ಸರ್ಕಾರಿ ನೌಕರರಿಗೆ ಕಡ್ಡಾಯ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆ*

> ಶಿಕ್ಷಣ ಇಲಾಖೆಯ ಪ್ರಾಥಮಿಕ ಶಾಲಾ ಶಿಕ್ಷಕರು, ಡಿ ಗ್ರೂಪ್ ನೌಕರರು ಮತ್ತು ಚಾಲಕರನ್ನು ಹೊರತು ಪಡಿಸಿ ಎಲ್ಲಾ ಶಿಕ್ಷಕರು ಮತ್ತು ನೌಕರರು ಮಾರ್ಚ್ 2017 ಒಳಗೆ ಕಂಪ್ಯೂಟರ್ ಸಾಕ್ಷರತಾ ಪರೀಕ್ಷೆಯಲ್ಲಿ ಉತ್ತಿರ್ಣರಾಗಬೇಕು.

> ಇಲ್ಲದಿದ್ದಲ್ಲಿ ವಾರ್ಷಿಕ ವೇತನ ಬಡ್ತಿಯನ್ನು ನೀಡುವಂತಿಲ್ಲ. ಸರ್ಕಾರ ಪರೀಕ್ಷೆ ನಡೆಸುವ ಜವಾಬ್ದಾರಿಯನ್ನು *ಕಿಯೋನಿಕ್ಸ್* ಸಂಸ್ಥೆಗೆ ನೀಡಿದೆ.
*ಪರೀಕ್ಷೆ ಹೇಗೆ*
> www.clt.karnataka.gov.in

> ಮೇಲಿನ ವೆಬ್ ವಿಳಾಸಕ್ಕೆ ಲಾಗಿನ್ ಆಗಬೇಕು.

1.ವೆಬ್ ಪೇಜ್ ತೆರೆದ ನಂತರ *ನೋಂದಣಿ* ಎಂಬುದರ ಮೇಲೆ ಕ್ಲಿಕ್ ಮಾಡಬೇಕು.

2.ನಿಮ್ಮ ಕೆ.ಜಿ.ಐ.ಡಿ ಸಂಖ್ಯೆ ಮತ್ತು ಜನ್ಮದಿನಾಂಕ ಎಂಟ್ರಿ ಮಾಡಿ ಸಬ್ಮಿಟ್ ಕೊಡಿ

3.ನಿಮ್ಮ ಹೆಚ್.ಆರ್.ಎಂ.ಎಸ್ ಮಾಹಿತಿಯ ಪುಟ ತೆರೆದುಕೊಳ್ಳುತ್ತದೆ. ಅದರಲ್ಲಿ ಡಿ.ಡಿ.ಒ ಮೊಬೈಲ್ ನಂಬರ್ ತಗೆದು ನಿಮ್ಮ ಮೊಬೈಲ್ ನಂಬರ್ ಹಾಗೂ ಇಮೇಲ್ ವಿಳಾಸ ಸೇರಿಸಿ.

4.ನಿಮ್ಮ ಭಾವಚಿತ್ರ (50kb) ಮತ್ತು ಸಹಿ (20kb) ಅಪ್ಲೋಡ್ ಮಾಡಿ, ನಿಮ್ಮ ಎಲ್ಲಾ ಮಾಹಿತಿಯನ್ನು ಸೇರಿಸಿ ಸಬ್ಮಿಟ್ ಕೊಡಿ.

5.ನಿಮ್ಮ ಮೈಲ್ ಗೆ ಯುಸರ್ ಐ.ಡಿ ಮತ್ತು ಪಾಸ್ವರ್ಡ ಬರುತ್ತದೆ.

6. ಅದನ್ನು ಬಳಸಿ ನಿಮ್ಮ ಪರೀಕ್ಷೆಯ ಪ್ರವೇಶ ಪತ್ರ ಪಡೆದು ಕೊಳ್ಳಿ.
6.ಪ್ರತಿ ಶನಿವಾರ ನಿಗದಿಪಡಿಸಿದ ಪರೀಕ್ಷಾ ಕೇಂದ್ರದಲ್ಲಿ 80 ಅಂಕದ 90 ನಿಮಿಷದ ಪರೀಕ್ಷೆ ನಡೆಯುತ್ತದೆ. ಒಟ್ಟು ನಾಲ್ಕು ಬ್ಯಾಚ್ ಇರುತ್ತದೆ.

7.ಪರೀಕ್ಷೆಗೆ ಒ.ಒ.ಡಿ ಸೌಲಭ್ಯ ಇದೆ.

8.ಮೊದಲ ಬಾರಿಗೆ ಪರೀಕ್ಷಾ ಶುಲ್ಕ ಇಲ್ಲ. ನಂತರದ ಪ್ರತಿಯೊಂದು ಪರೀಕ್ಷೆಗೆ 300ರೂ ಶುಲ್ಕ ಇದೆ.

9.ಅರ್ಜಿಯನ್ನು ಹಾಕುವ ಮೊದಲು ಪ್ರತ್ಯೇಕ ಹಾಳೆಯಲ್ಲಿ ನಿಮ್ಮ ಭಾವಚಿತ್ರ ಹಾಗೂ ಸಹಿಯನ್ನು ಮಾಡಿ ಮೇಲೆ ತಿಳಿಸಿದಂತೆ ನಿಗದಿತ ಕೆ.ಬಿ ಒಳಗೆ ಸ್ಕ್ಯಾನ್ ಮಾಡಿ ಜಿ.ಪಿ.ಜಿ ಪೈಲ್ ಅಲ್ಲಿ ಸೆವ್ ಮಾಡಿಕೊಳ್ಳಿ.

> *ಪರೀಕ್ಷೆ ಪಠ್ಯಕ್ರಮ*

> 1.ಎಂ.ಎಸ್.ವರ್ಡ್
> 2.ಎಂ.ಎಸ್.ಎಕ್ಸೆಲ್
> 3.ಎಂ.ಎಸ್.ಪವರ್ ಪಾಯಿಂಟ್
> 4.ನುಡಿ
> 5.ಇಮೇಲ್
> 6.ಕಂಪ್ಯೂಟರ್ ಸಾಮಾನ್ಯ ಜ್ಞಾನ.

3 comments:

  1. thank you for informing sir

    ReplyDelete
  2. Good information abt CLT exam

    ReplyDelete
  3. it is very useful to all govt employees adn they have to use this information, good job.

    ReplyDelete

We reply u shortly .. pls wait